ಜನಮನಶಿಲ್ಪಿ

55.00

In stock

ಚಂದ್ರಶೇಖರ ಭಂಡಾರಿ

55.00

Description

ತಮ್ಮ ಮನೆತನದ ಏಕಮಾತ್ರಪುತ್ರನಾಗಿ, ೧೯೧೪ರಲ್ಲಿ ನಾಗಪುರದಲ್ಲಿ ಜನಿಸಿದ ಯಾದವರಾವ್ ಜೋಶಿ ಅವರು ಬಾಲ್ಯದಲ್ಲೇ ’ಸಂಗೀತಬಾಲಭಾಸ್ಕರ’ ಎಂದು ಬಿರುದಾಂಕಿತರಾಗಿದ್ದವರು. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾಕ್ಟರ್ ಹೆಡಗೆವಾರರ ಸಂಪರ್ಕಕ್ಕೆ ಬಂದ ನಂತರ, ಕೀರ್ತಿಶಿಖರದಲ್ಲಿರುವಾಗಲೇ ’ಸಂಗೀತಸಂನ್ಯಾಸ’ ಸ್ವೀಕರಿಸಿದರು. ಮುಂದಿನ ಜೀವನದಲ್ಲಿ ಸಂಘವೇ ಅವರಿಗೆ ಬದುಕಿನ ಶ್ರುತಿಯಾಯಿತು. ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬಾಸಾಹೇಬ ಆಪ್ಟೆ ಹಾಗೂ ಡಾಕ್ಟರ್ ಹೆಡಗೆವಾರರ ಪ್ರೇರಣಾಪೂರ್ಣ ನಿಕಟ ಸಹವಾಸದಲ್ಲಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡ ಯಾದವರಾಯರು ಎಂ.ಏ.ಎಲ್.ಎಲ್.ಬಿ ಪದವಿಪ್ರಾಪ್ತಿಯ ನಂತರ ರಾಷ್ಟ್ರಕಾರ್ಯಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡರು.

Main Menu

ಜನಮನಶಿಲ್ಪಿ

55.00

Add to Cart