Book Description
ಅಂಡಮಾನ್ ಕಾರಾಗೃಹ ವ್ಯವಸ್ಥೆಯ ಹಿನ್ನೆಲೆಯನ್ನೇ ವಸ್ತುವಾಗಿರಿಸಿಕೊಂಡ ಒಂದು ವೈಶಿಷ್ಟ್ಯಪೂರ್ಣ ಕಾದಂಬರಿ ಸಾವರಕರ್ ರಚಿಸಿದ ‘ಕಾಳೇ ಪಾಣೀ’. ಅಂಡಮಾನ್ ಬದುಕಿನ ಹತ್ತುಹಲವು ಮಗ್ಗುಲುಗಳ ಮತ್ತು ಹಲವಾರು ಜನರ ಜೀವನದ ಮೇಲೆ ಅದು ಬೀರಿದ ಪರಿಣಾಮಪರಂಪರೆಯ ಚಿತ್ರಣ ಇದರಲ್ಲಿದೆ. ಆಕಾರದಲ್ಲಿ ಕಾಲ್ಪನಿಕ ಕಥೆಯಾದರೂ ಈ ಕಾದಂಬರಿಯ ಮುಖ್ಯ ಎಳೆಗಳು ವಾಸ್ತವಾನುಭವದಿಂದ ಹೊಮ್ಮಿದವೇ. ಶೃಂಗಾರ, ವೀರ, ಕರುಣ ಮೊದಲಾದ ಎಲ್ಲ ರಸಗಳೂ ಈ ಕಾದಂಬರಿಯಲ್ಲಿ ಪ್ರದರ್ಶನಗೊಂಡಿವೆ. ಸಾವರಕರರ ಬದುಕು-ಬರಹಗಳಲ್ಲಿ ಆಸಕ್ತಿಯಿರುವ ಈ ಪೀಳಿಗೆಯ ಓದುಗರಿಗೆ ಅವರ ಈ ಕಾದಂಬರಿಯನ್ನು ಸಂಕ್ಷಿಪ್ತ ರೂಪದಲ್ಲಿಯಾದರೂ ಪರಿಚಯಿಸುವ ಆಶಯದಿಂದ ಸಿದ್ಧಗೊಂಡ ಅನುವಾದಿತ ಕನ್ನಡಾವೃತ್ತಿ – ’ಕರಿನೀರ ರೌರವ’.
Reviews
There are no reviews yet.