Sale!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮ

90.00

ನಾರಾಯಣ ಶೇವಿರೆ – ಎಂ ಎನ್ ರವೀಂದ್ರ

Book Description

ನಮ್ಮ ಸ್ವಾತಂತ್ರ್ಯ ಹೋರಾಟವೆಂಬುದು ನೂರೋ ಇನ್ನೂರೋ ವರ್ಷಗಳ ಸಂಘರ್ಷವಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಡೆದುಹೋದ ಕ್ರಾಂತಿಯೂ ಅಲ್ಲ; ನಮ್ಮ ಸಂಸ್ಕೃತಿ-ಸಭ್ಯತೆಗಳ ಮೇಲೆ ಶತಶತಮಾನಗಳಿಂದ ನಿರಂತರ ನಡೆಯುತ್ತ ಬಂದಿರುವ ಪರಕೀಯರ ದಾಳಿ-ಆಕ್ರಮಣಗಳನ್ನು ದಿಟ್ಟವಾಗಿ ಎದುರಿಸಿ ನಿಂತ ಸುದೀರ್ಘ ಸಂಘರ್ಷ. ಇದು ಕೇವಲ ನಮ್ಮ ಭೌತಿಕ ಸಂಪತ್ತನ್ನು, ವ್ಯಾವಹಾರಿಕ ಗಡಿಗಳನ್ನು ರಕ್ಷಿಸಿಕೊಳ್ಳಲು ನಡೆದದ್ದಲ್ಲ; ಜೀವ-ಜಗತ್ತುಗಳನ್ನು ಕುರಿತ ಆತ್ಯಂತಿಕ ಸತ್ಯವನ್ನು, ಧರ್ಮವನ್ನು ಕಾಪಾಡಲು ನಡೆದದ್ದು. ಈ ನಿರಂತರ ಸಂಘರ್ಷವನ್ನು ವ್ಯಾವಹಾರಿಕ ಸಾಂಪತ್ತಿಕ ಕಾರಣಗಳನ್ನು ಮೀರಿದ ತಾತ್ತ್ವಿಕ ಸಂಗತಿಗಳು ಮುನ್ನಡೆಸಿವೆ. ನಮ್ಮದು ಮತವಿಸ್ತರಣೆಗಾಗಿ, ಗಡಿಯ ವಿಸ್ತರಣೆಗಾಗಿ, ಅಧಿಕಾರಸ್ಥಾಪನೆಗಾಗಿ, ಭೂಮಿ-ಸಂಪತ್ತುಗಳ ಒಡೆತನಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ; ಇದೆಲ್ಲವುಗಳಿಗಿಂತ ಮಿಗಿಲಾದ ’ಧರ್ಮ’ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟ.

ಈ ಸಂಗತಿಯನ್ನು ಮತ್ತೊಮ್ಮೆ ಮೆಲುಕು ಹಾಕಲು ಪೂರಕವಾಗಿ ಒದಗಿಬರುವ ಮಹತ್ತ್ವದ ಕೃತಿ ಇದು.

Reviews

There are no reviews yet.

Be the first to review “ಭಾರತೀಯ ಸ್ವಾತಂತ್ರ್ಯ ಸಂಗ್ರಾಮ”

Your email address will not be published.

This site uses Akismet to reduce spam. Learn how your comment data is processed.