ಭಾರತೀಯ ಗಣಿತ ಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ

125.00

In stock

125.00

Description

ತತ್ತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆ ಸುಪರಿಚಿತ. ಅದರಂತೆ ಅಂಕಗಣಿತ, ಕ್ಷೇತ್ರಗಣಿತ (ಜ್ಯಾಮಿತಿ), ತ್ರಿಕೋನಮಿತಿಶಾಸ್ತ್ರ ಮೊದಲಾದವುಗಳ ಬಳಕೆ ಭಾರತೀಯ ನಾಗರಿಕತೆಯ ವಿಕಾಸಕ್ಕೆ ಅಡಿಪಾಯ ಒದಗಿಸಿತ್ತು. ದಿಗ್ದರ್ಶನ ಮಾತ್ರದ ಈ ಗ್ರಂಥದಲ್ಲಿ ಕಾಲಾನುಕ್ರಮದಲ್ಲಿ ಭಾರತೀಯ ಗಣಿತಶಾಸ್ತ್ರದ ವಿಕಾಸದ ಹಂತಗಳನ್ನು ಪರಿಚಯ ಮಾಡಿಕೊಡಲಾಗಿದೆ. ನಿರೂಪಣೆಯ ಜೊತೆಜೊತೆಗೇ ಸಂಸ್ಕೃತ ಮೂಲಗಳನ್ನೂ ಉಲ್ಲೇಖಿಸಲಾಗಿದೆ. ಅಲ್ಲದೇ ಶಾಸ್ತ್ರಗ್ರಂಥಗಳ ಕುರಿತ ಶೋಧಕಾಂಗ ಇದೀಗ ಯಾವ ಹಂತ ತಲಪಿದೆ ಎಂಬುದನ್ನೂ ಅಲ್ಲಲ್ಲಿ ನಿರ್ದೇಶಿಸಲಾಗಿದೆ. ಈ ಹಿಂದೆಯೇ ಭಾರತೀಯ ಗಣಿತಶಾಸ್ತ್ರದ ಬೆಳವಣಿಗೆಯನ್ನು ಕುರಿತು ಶೋಧಮಾಡಿರುವ ಮಹನೀಯರ ಗ್ರಂಥಗಳಲ್ಲಿನ ಮಾಹಿತಿಗೆ ಗಮನ ಸೆಳೆಯಲಾಗಿದೆ. ಹೀಗೆ ಸಾಮಾನ್ಯರಿಗೆ ಮಾತ್ರವಲ್ಲದೇ ಈ ದಿಶೆಯಲ್ಲಿ ಅಧ್ಯಯನ-ಶೋಧನೆ ಮಾಡಬಯಸುವವರಿಗೂ ಉಪಯುಕ್ತವಾಗುವ ಮಾಹಿತಿ ಈ ಗ್ರಂಥದಲ್ಲಿದೆ.

Specification

Additional information

book-no

88

isbn

SBN : 81-7531-033-2

author-name

published-date

2002

language

Kannada

Main Menu

ಭಾರತೀಯ ಗಣಿತ ಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ

125.00

Add to Cart