Book Description
ನಶ್ವರ ರಾಜಪಟ್ಟ ಬಿಟ್ಟು, ಶಾಶ್ವತ ಆಚಾರ್ಯಪಟ್ಟ ಏರಿದ ದಿಟ್ಟೆದೆಯ ಗಂಡುಗಲಿ ಬೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿದ್ದಾಗ ಅವರ ಜ್ಞಾನಸಂಪತ್ತು ನಷ್ಟವಾಗುವುದು ಶ್ರೀ ಕೃಷ್ಣನಿಗೆ ಸರಿಕಾಣಲಿಲ್ಲ. ಬೀಷ್ಮ ಪಿತಾಮಹರ ಅನುಭವದ ಜ್ಞಾನವು ಯುಧಿಷ್ಠಿರನಿಗೆ ದೊರೆಯುವಂತೆ ಏರ್ಪಡಿಸಿದ ಶ್ರೀಕೃಷ್ಣ. ಶರಶಯ್ಯೆಯಲ್ಲಿ ಮಲಗಿದ್ದ ಬೀಷ್ಮಾಚಾರ್ಯರು ಧರ್ಮರಾಯನಿಗೆ ’ರಾಜಧರ್ಮವನ್ನು ವಿಸ್ತಾರವಾಗಿ ಉಪದೇಶಿಸಿದರು. ಅದರಿಂದ ಆರಿಸಿದ ಶ್ಲೋಕಗಳ ಸಂಗ್ರಹ- ’ಬೀಷ್ಮ ಉವಾಚ’. ರಾಜ್ಯಾಡಳಿತ ನಡೆಸುವಲ್ಲಿ ಯಾವಯಾವ ಕರ್ತವ್ಯಕ್ಕೆ ಎಂಥೆಂಥ ಗುಣಸ್ವಭಾವಗಳು ಅಗತ್ಯ ಎಂಬುದರ ಸೂಚನೆ ಈ ಗ್ರಂಥದಲ್ಲಿದೆ.
Reviews
There are no reviews yet.