Book Description
1857ರ ಮಹಾಸಮರ ಮೊದಲಾದವು ಕೇವಲ ರಾಜಕೀಯ ದಾಸ್ಯವಿಮೋಚನೆಗಾಗಷ್ಟೆ ನಡೆದ ಸಂಘರ್ಷಗಳಲ್ಲ. ಸ್ವಧರ್ಮ, ಸ್ವರಾಷ್ಟ್ರಭಾವನೆಯ ಉದ್ದೀಪ್ತ ಸ್ಥಿತಿ ಸ್ಪೋಟಕಗಳಾಗಿದ್ದವು ಅವು. ರಾಷ್ಟ್ರೀಯತೆಯೆಂಬುದು ಒಂದು ವಿಶಿಷ್ಟ ಧರ್ಮ ಅಥವಾ ಶ್ರದ್ಧೆ ಅಥವಾ ನಂಬಿಕೆಯಷ್ಟೆ ಅಲ್ಲ. ಸನಾತನ ಧರ್ಮವೇ ನಮಗೆ ರಾಷ್ಟ್ರೀಯತೆ ಎಂಬ ಶ್ರೀ ಅರವಿಂದರ ಅರ್ಥಗರ್ಭಿತ ಉಕ್ತಿಯು ಹಲವು ಸೃಷ್ಟೀಕರಣಗಳನ್ನು ಒಮ್ಮೆಗೇ ನೀಡಿದೆ. ಕೆಲವು ಅತಿಶಯ ಘಟನೆಗಳು ಇತಿಹಾಸದಲ್ಲಿ ದಿಗ್‌ವ್ಯತ್ಯಯ ತರುತ್ತವೆ ಮಾತ್ರವಲ್ಲ, ಇತಿಹಾಸಗತಿಗೆ ಅವು ತೀವ್ರತೆಯನ್ನುಂಟುಮಾಡುತ್ತವೆ. ಅವುಗಳ ಸಾಂಸ್ಕೃತಿಕ ಭೂಮಿಕೆಯ ಮತ್ತು ದೂರಗಾಮಿ ಪಶ್ಚಾತ್ಪರಿಣಾಮ ಸರಣಿಯ ಪರಿಜ್ಞಾನವೂ ಮಹತ್ತ್ವದ್ದಾಗುತ್ತದೆ. ಹೀಗೆ ನಿಜಾರ್ಥದಲ್ಲಿ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಹಲವು ಈಚಿನ ಇತಿಹಾಸ-ಪರ್ವಗಳನ್ನು ಈ ಸಂಕಲನದಲ್ಲಿನ ಪ್ರಬಂಧಗಳಲ್ಲಿ ಪರಾಮರ್ಶಿಸಲಾಗಿದೆ.
Reviews
There are no reviews yet.