ಧರೆಗಿಳಿದ ದಿವ್ಯತೇಜ

200.00

Out of stock

ಲ ನ ಶಾಸ್ತ್ರೀ

200.00

Description

ಭರತಖಂಡದ ಧಾರ್ಮಿಕ ಗೊಂದಲ, ಆಧ್ಯಾತ್ಮಿಕ ವಿಚಾರದಲ್ಲಿ ಪರಸ್ಪರ ವಿರೋಧಾಭಿಪ್ರಾಯಗಳೂ, ರಾಜಕೀಯವಾಗಿ ಅನಾಯಕತ್ವ ಇವು ತಲೆದೋರಿದ್ದಾಗ ದೇಶವು ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾಗ, ಶ್ರೀಶಂಕರಾಚಾರ್ಯರು ಅವತರಿಸಿದರು. ಶೈವ, ವೈಷ್ಣವ, ಶಾಕ್ತ, ಕಾಪಾಲಿಕ ಇತ್ಯಾದಿ ಮತಗಳಲ್ಲಿದ್ದ ಲೋಪದೋಷಗಳನ್ನು ತೊಲಗಿಸಿ ಅವುಗಳನ್ನು ವೈದಿಕ ಧರ್ಮದ ಆಶ್ರಯಕ್ಕೆ ತಂದು ಷಣ್ಮತ ಸ್ಥಾಪನಾಚಾರ್ಯರೆಂಬ ಹೆಸರು ಪಡೆದರು. ತತ್ತ್ವ ವಿಚಾರಗಳಲ್ಲಿ ವೇದ ವೇದಾಂತಗಳ ಪರಮಾರ್ಥವು “ಅದ್ವ್ಯೆತ ತತ್ತ್ವ” ಎಂಬುದನ್ನು ಸ್ಪಷ್ಟವಾಗಿ ಶ್ರುತಗೊಳಿಸಿದರು. ಭಾರತವು ಧಾರ್ಮಿಕವಾಗಿ ಒಂದು “ರಾಷ್ಟ್ರ” ಎಂಬುದನ್ನು ದೃಢಪಡಿಸಿ, ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಆ ಪೀಠಗಳಿಗೆ ಅಧ್ಯಕ್ಷರನ್ನಾಗಿ ಬೇರೆ ಬೇರೆ ಪ್ರಾಂತ್ಯಗಳ ವಿದ್ವಾಂಸರನ್ನು ನೇಮಿಸಿ ಭಾವೈಕ್ಯವನ್ನು ಮೂಡಿಸಿದರು. ಅಖಿಲ ಭಾರತದಲ್ಲೆಲ್ಲ ಒಂದು ಸಂಪರ್ಕಭಾಷೆಯಿರಬೇಕಾದ ಅವಶ್ಯಕತೆಯನ್ನು ಗಮನಿಸಿ, ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಿ, ತಮ್ಮ ಎಲ್ಲಾ ಗ್ರಂಥಗಳನ್ನು ಸಂಸ್ಕೃತದಲ್ಲಿಯೇ ರಚಿಸಿ ಮುಂದಿನವರಿಗೆ ಮಾರ್ಗದರ್ಶಕರಾದರು. ಭಾರತ ಭಾಗ್ಯವಿಧಾತರಾದರು.

Main Menu

ಧರೆಗಿಳಿದ ದಿವ್ಯತೇಜ

200.00