ವಿಕ್ರಾಂತ ಭಾರತ

275.00

Book Description

1857 ರಿಂದ 1947 ರ ವರೆಗಿನ ಕಾಲಘಟ್ಟದಲ್ಲಿ ಅಬಾಲವೃದ್ಧರಾದಿಯಾಗಿ ಸಾಮಾನ್ಯ ಜನರೂ ಸೇರಿದಂತೆ ಲಕ್ಷಾಂತರ ಜನರು ತಮ್ಮ ತಮ್ಮ ಸಾಮರ್ಥ್ಯಕ್ಕನುಗಣವಾಗಿ ಪರಕೀಯ ಪ್ರಭುತ್ವದ ವಿರುದ್ದ ಸೆಣಸಿದರಲ್ಲದೆ ಅದಕ್ಕೆ ಪ್ರತಿಫಲವಾಗಿ ದೊರೆತ ಛಡಿಯೇಟು, ಜೈಲುವಾಸ, ಕರಿನೀರ ಶಿಕ್ಷೆಗಳನ್ನಷ್ಟೆ ಅಲ್ಲದೆ ಮರಣದಂಡನೆಯನ್ನೂ ನಗುನಗುತ್ತ ಸ್ವೀಕರಿಸಿದರು. ಅವರ ಅಪ್ರತಿಮ ತ್ಯಾಗ-ಬಲಿದಾನವನ್ನು ಶೌರ್ಯಪರಾಕ್ರಮವನ್ನು ಸ್ವಾತಂತ್ರ್ಯೋತ್ತರ ಪೀಳಿಗೆಗೆ ಪರಿಚಯಿಸಿದ ಕನ್ನಡದ ಪ್ರಮುಖ ಕೃತಿ – ‘ವಿಕ್ರಾಂತ ಭಾರತ’.
೧೯೬೫ರಲ್ಲಿ ಖ್ಯಾತ ಲೇಖಕ ತಿ.ತಾ. ಶರ್ಮ ಅವರು ಬರೆದ ಈ ಕೃತಿಯು ಸ್ವಾತಂತ್ರ್ಯ ಹೋರಾಟವನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತರಬಹುದಾದ ಸಾಧ್ಯತೆಯನ್ನು ತೋರಿಸಿಕೊಟ್ಟಿತು. ಈ ಪುಸ್ತಕದಿಂದ ಸ್ಫೂರ್ತಿಪಡೆದು ಕನ್ನಡದ ಹಲವು ಲೇಖಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಕಥೆ, ಕಾವ್ಯ, ಕಾದಂಬರಿ, ನಾಟಕ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳ ಮೂಲಕ ಸ್ವಾತಂತ್ರ್ಯಹೆರಾಟದ ಕ್ರಾಂತಿಕಾರಿ ಇತಿಹಾಸ ನಾಡಿನ ಮನೆಮನೆಗೂ ತಲಪಿದ್ದು, ಈಗ ಇತಿಹಾಸ.
ಇಂಥದ್ದೊಂದು ಮಹತ್ತ್ವ ಕೃತಿಯನ್ನು ಕನ್ನಡದ ಓದುಗರಿಗೆ ಮತ್ತೆ ಲಭ್ಯವಾಗಬೇಕೆನ್ನುವ ಆಶಯದಿಂದ ರಾಷ್ಟ್ರೋತ್ಥಾನ ಸಾಹಿತ್ಯ ಇದನ್ನು ಪುನರ್‌ಪ್ರಕಾಶಿಸಿದೆ.

Additional information

Book No

Author Name

Language

Reviews

There are no reviews yet.

Be the first to review “ವಿಕ್ರಾಂತ ಭಾರತ”

Your email address will not be published.

This site uses Akismet to reduce spam. Learn how your comment data is processed.