Book Description
ಸ್ನೇಹಿತ ಹೇಳಿದ ಒಂದು ಮಾತು, ಭಾಷಣಕಾರರು ಪ್ರಸ್ತಾಪಿಸಿದ ಒಂದು ವಿಚಾರ, ಸಾಹಿತಿ ಚಿತ್ರಿಸಿದ ಒಂದು ಪ್ರಸಂಗ, ಹರಿಕಥೆದಾಸರು ಹೇಳಿದ ಒಂದು ಘಟನೆ – ಎಷ್ಟೋ ವ್ಯಕ್ತಿಗಳಿಗೆ ಜ್ಞಾನೋದಯವಾಗಿ ಪರಿಣಮಿಸಿದೆ. ಅದರಿಂದಾಗಿ ಅವರ ಬದುಕಿನಲ್ಲೇ ಆಮೂಲಾಗ್ರ ಪರಿವರ್ತನೆ ಕಂಡುಬಂದಿದೆ. ಬದುಕಿನ ವಿಶಾಲ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಪಡೆಯಲೇಬೇಕು. ರಾಜಕಾರಣಿ, ವೈದ್ಯ, ಪತ್ರಕರ್ತ, ಮಾರಾಟಗಾರ, ವ್ಯಾಪಾರಿ ಎಲ್ಲರೂ ತಮ್ಮ ನೈಜ ಸ್ವಭಾವವನ್ನು ರೂಪಿಸಿಕೊಳ್ಳದಿದ್ದರೆ ಸೋಲು ಅನುಭವಿಸಬೇಕಾಗುತ್ತದೆ. ಬದುಕಿನಲ್ಲಿ ಸಂತೋಷ, ನೆಮ್ಮದಿಗಳನ್ನು ಹೊಂದಿ ಜೀವನದ ಗೆಲುವಿನ ಗುಟ್ಟನ್ನು ತಿಳಿಯಬಯಸುವವರಿಗೆ ಈ ಪುಸ್ತಕ ಒಂದು ವರ.
Reviews
There are no reviews yet.