ಗೌರೀಶ ಕಾಯ್ಕಿಣಿ ಅವರ ಬೆಲೆಬಾಳುವ ಬರಹಗಳು

200.00

Out of stock

ಎಂ ಜಿ ಹೆಗಡೆ

Compare

200.00

Description

ವೃತ್ತಿಯಿಂದ ಅಧ್ಯಾಪಕರೂ, ಪ್ರವೃತ್ತಿಯಿಂದ ಬರಹಗಾರರೂ, ಪ್ರಕೃತ್ತಿಯಿಂದ ಜಿಜ್ಞಾಸುವೂ ಆಗಿದ್ದ ಗೌರೀಶ ಕಾಯ್ಕಿಣಿಯವರದು ಒಂದು ನಾಡಿನ ಪುನರುಜ್ಜೀವನದ ಕಾಲದಲ್ಲಿ ಕಂಡುಬರಬಹುದಾದ ವ್ಯಕ್ತಿತ್ವ. ಅವರು ಕನ್ನಡದಲ್ಲಿ ವಿಚಾರವಾದವೆಂಬ ಪರಿಕಲ್ಪನೆಯನ್ನು ಸೃಷ್ಟಿಸಿ, ಪ್ರತಿಪಾದಿಸಿದರು. ಅವರ ಬದುಕೇ ವ್ಯಾಸಂಗದ, ಜಿಜ್ಞಾಸೆಯ, ವಿಚಿಕಿತ್ಸೆಯ ಮಹಾಪ್ರಸ್ಥಾನವೆಂಬತ್ತಿತ್ತು. ಅವರ ಆಸಕ್ತಿಯ ಲೋಕ ವಿಸ್ತಾರವಾದದ್ದು. ಶಿಕ್ಷಕ, ಶಿಕ್ಷಣತಜ್ಞ, ಪತ್ರಕರ್ತ, ಸಂಘಟಕ, ರಾಜಕೀಯ ವ್ಯಾಖ್ಯಾನಕಾರ, ಸಾಹಿತ್ಯ ವಿಮರ್ಶಕ ಮತ್ತು ಮೀಮಾಂಸಕಾರ, ನಾಟಕಕಾರ, ಸಂಗೀತಜ್ಞ ಹೀಗೆ ಹತ್ತೆಂಟು ವಿಧದಲ್ಲಿ ಅವರ ಕಾರ್ಯಶಕ್ತಿ ಅಭಿವ್ಯಕ್ತಿ ಪಡೆದಿದೆ. ಏಳು ದಶಕಗಳ ತಮ್ಮ ಸಾಹಿತ್ಯಿಕ ಜೀವನದಲ್ಲಿ ಸುಮಾರು ಹತ್ತು ಸಾವಿರ ಪುಟಗಳಷ್ಟು ಮುದ್ರಿತ ಸಾಹಿತ್ಯವನ್ನು ಅವರು ನಿರ್ಮಿಸಿದರು. ವಿಮರ್ಶಕರಾಗಿ ನವೋದಯ ಸಾಹಿತ್ಯವನ್ನು ವ್ಯಾಖ್ಯಾನಿಸಿದಷ್ಟೇ ಉತ್ಸಾಹದಿಂದ ನವ್ಯ, ಬಂಡಾಯ, ದಲಿತ ಸಾಹಿತ್ಯಗಳಿಗೂ ಪ್ರತಿಕ್ರಯಿಸಿದರು. ನಿರಂತರವಾಗಿ ತಿಳಿಯುವ ಆಸೆ ಹಾಗೂ ಜೀವಂತ ಲವಲವಿಕೆಯನ್ನು ಕಾದಿಟ್ಟುಕೊಂಡು ಬುದ್ಧಿಯ ಪ್ರಜ್ಞೆಯಾಗಿ ವಿಕಾಸವಾಗಲೆಂದು ಹಾರೈಸಿ ಪಡುಮೂಲೆಯ ಕಡಲತಡಿಯ ಪುಟ್ಟ ಗೂಡಿನ ಗಾಳಿಚಿಟ್ಟೆಯ ಮೇಲೆ ಕೂತು ಚಿಂತಿಸಿದ ಗೌರೀಶರ ಆಯ್ದ ಬರಹಗಳ ಸಂಕಲನ ಇದು.

Main Menu

ಗೌರೀಶ ಕಾಯ್ಕಿಣಿ ಅವರ ಬೆಲೆಬಾಳುವ ಬರಹಗಳು

200.00