Book Description
ಡಿ ವಿ ಜಿ ಯವರಂಥ ಋಷಿಕಲ್ವರ ಒಟ್ಟು ಬರೆವಣಿಗೆ ಏನಿಲ್ಲವೆಂದರೂ ಹತ್ತು-ಹನ್ನೊಂದು ಸಾವಿರ ಪುಟಗಳಷ್ಟಾದೀತು. ಇದರಲ್ಲಿ ಸಾರ್ವಕಾಲಿಕವೆಂದು ನಚ್ಚಿ ನಲಿಯಬಹುದಾದ ಭಾಗವು ಮೂರು-ನಾಲ್ಕು ಸಾವಿರ ಪುಟಗಳಿಗೆ ಕಡಮೆಯಿಲ್ಲ. ಇಂತಿರಲು ಇದನ್ನೆಲ್ಲ ಮುನ್ನೂರು ಪುಟಗಳಿಗೆ ಪ್ರಾತಿನಿಧಿಕರೂಪದಲ್ಲಿ ಸಂಗ್ರಹಿಸುವುದೆಂದರೆ ಹರಸಾಹಸದ ಮಾತು. ಆದರೂ ಇಂಥ ವಾಚಿಕೆಗಳು ಕಾಲಕಾಲಕ್ಕೆ ಹವಣುಗೊಳ್ಳದೆ ಹೆಚ್ಚಿನ ಓದುಗರಿಗೆ ಅನುಕೂಲವಾಗದು. ಡಿವಿಜಿಯವರ ಭಾವ ಬುದ್ಧಿಗಳ ಅತ್ಯುತ್ತಮವೂ ಅತ್ಯಂತ ಸಂಗತವೂ ಆದ ಅಭಿವ್ಯಕ್ತಿಯನ್ನೇ ಅವರಿಗಿರುವ ಪುಟವ್ಯಾಪ್ತಿಯಲ್ಲಿ ಬಹುಮಟ್ಟಿಗೆ ಆಡಕಗೊಳಿಸುವ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
Reviews
There are no reviews yet.