Book Description
ವಿಶ್ವದ ಸಂಸ್ಕೃತಿಗಳಲ್ಲಿ ಅತಿ ಪುರಾತನವಾದುದು ಮಾತ್ರವಲ್ಲದೆ ಸಹಸ್ರಾಬ್ದಗಳ ನಂತರವೂ ಜೀವಂತವಾಗಿ ಉಳಿದಿರುವುದು ಭಾರತೀಯ ಸಂಸ್ಕೃತಿ. ಇದು ಚಿರಂತನವಾಗಿರುವಂತೆ ನಿತ್ಯನೂತನವೂ ಆಗಿದೆ. ಇದರ ವೈವಿಧ್ಯ, ವಿಶಾಲತೆ, ಸಂಸ್ಕಾರಕ ಗುಣ, ಉದಾತ್ತತೆಗಳು ಅನುಪಮವಾದವು. ಸಾಮರಸ್ಯ ಇದರ ಜೀವಾಳ. ವೈಜ್ಞಾನಿಕ ಮತ್ತು ಭಾವನಾತ್ಮಕ ಎರಡೂ ಸ್ತರಗಳಲ್ಲಿ ಏಕಕಾಲಕ್ಕೆ ಅದ್ಬುತವಾಗಿ ಸ್ಪಂದಿಸುವ ಶಕ್ತಿಯಿರುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ.
ಒಬ್ಬ ಸಾಮಾನ್ಯ ಮನುಷ್ಯನು ಜನಸಾಮಾನ್ಯರಿಗಾಗಿ ಬರೆದ ಪುಸ್ತಕ ಇದು. ಈ ಪುಸ್ತಕದಲ್ಲಿ ಭಾರತೀಯ ಸಂಸ್ಕೃತಿಯ ಅಧ್ಯಾತ್ಮವನ್ನು ಕಾಣಬಹುದು ಹಾಗೂ ಅದರ ಒಳದರ್ಶನವನ್ನು ಪಡೆಯಬಹುದು. ಭಾರತೀಯ ಸಂಸ್ಕೃತಿಯ ದರ್ಶನವನ್ನು ಮಾಡಿಸುವುದೇ ಈ ಪುಸ್ತಕದ ಉದ್ದೇಶ.
Reviews
There are no reviews yet.